ಮೆಂತಾಲ್
ಏಕಚಕ್ರೀಯ ಟರ್ಪೀನ್ ವರ್ಗಕ್ಕೆ ಸೇರಿದ ದ್ಯುತಿಪಟು ಆಲ್ಕೊಹಾಲ್. ಅಣುಸೂತ್ರ ಅ10ಊ20ಔ.  ಮೆಂತಾ ಪಿಪೆರಿಟ ವರ್ಗದ ನಾನಾ ಬಗೆಯ ಸಸ್ಯಗಳಿಂದ ಪೆಪ್ಪರ್‍ಮಿಂಟ್ ತೈಲಗಳನ್ನು ತಯಾರಿಸುವುದು ಸರಿಯಷ್ಟೆ. ಇವೆಲ್ಲದರಲ್ಲೂ ಎಡಮುರಿ ಮೆಂತಾಲ್ ಇರುತ್ತದೆ. ಜಪಾನಿನಲ್ಲಿ ತಯಾರಿಸುವ ಪೆಪ್ಪರ್‍ಮಿಂಟ್ ತೈಲದಲ್ಲಿ ಅಲ್ಪಸ್ವಲ್ಪ ಇದರ ದ್ಯುತಿಪ್ರತೀಪಕವಾದ, ದ್ರವರೂಪದ ಬಲಮುರಿ ನಿಯೊಮೆಂತಾಲ್ ಇರುವುದು ಕಂಡುಬಂದಿದೆ. ಎಡಮುರಿ ಮೆಂತಾಲ್ ನಾಲ್ಕು ವಿವಿಧ ರೂಪಗಳಲ್ಲಿ ಸ್ಫಟಿಕೀಕರಿಸುತ್ತದೆ. ಸಾಮಾನ್ಯವಾದದ್ದು ( ರೂಪ, ಅಗಲವಾದ ಸೂಜಿ ಆಕಾರದ ಹರಳುಗಳಿವು. ಇವು ಬಲಮುರಿ. ಆದರೆ ದ್ರವಸ್ಥಿತಿಯಲ್ಲಿ ಅಥವಾ ದ್ರಾವಣರೂಪದಲ್ಲಿರುವುದು ಎಡಮುರಿ ಮೆಂತಾಲಿನ ಭೌತಸ್ಥಿತಿಗಳು ಹೀಗಿವೆ: ದ್ರವನ ಬಿಂದು 430ಅ, 1 ವಾಯುಮಂಡಲ ಒತ್ತಡದಲ್ಲಿ ಕುದಿಬಿಂದು 2160ಅ, ಸಾಪೇಕ್ಷ ಸಾಂದ್ರತೆ 0.904 (ಆ1515), ವಿಶಿಷ್ಟ ಆವರ್ತನೆ (ಸ್ಟೆಸಿಫಿಕ್ ರೊಟೇಷನ್) -49.440, ಸ್ಫಟಿಕರೂಪದ ಫೀನೈಲ್ ಯೂರಿಥೇನನ್ನೂ (ದ್ರವನ ಬಿಂದು 1120ಅ) ಆಮ್ಲೀಯ ಫ್ತ್ಯಾಲೇಟನ್ನೂ (ದ್ರವನ ಬಿಂದು 1220ಅ) ಕೊಡುವುದು. ಮೆಂತಾಲಿನಲ್ಲಿ ಮೂರು ಅಸಮಾಂಗ ಕಾರ್ಬನ್ ಪರಮಾಣುಗಳಿವೆ. ಆದ್ದರಿಂದ ಇದು ತಾತ್ತ್ವಿಕವಾಗಿ ನಾಲ್ಕು ಬಲಮುರಿ, ನಾಲ್ಕು ಎಡಮುರಿ ಮತ್ತು ನಾಲ್ಕು ರೆಸೆಮಿಕ್ ರೂಪಗಳಲ್ಲಿ ದೊರೆಯಬೇಕು (ಎಡಮುರಿ ಮತ್ತು ಬಲಮುರಿ ಐಸೊಮರುಗಳ ಮೋಲಾರ್ ಪ್ರಮಾಣದ ಮಿಶ್ರಣ ಬಾಹ್ಯಪರಿಹಾರದ ಫಲವಾಗಿ ದ್ಯುತಿಪಟುತ್ವವನ್ನು ಕಳೆದುಕೊಂಡಿರುವುದು. ಅಂಥ ಮಿಶ್ರಣಕ್ಕೆ ರೆಸೆಮಿಕ್ ರೂಪ ಎಂದು ಹೆಸರು). ಹೆಚ್ಚು ಕಡಿಮೆ ಈ ರೂಪಗಳನ್ನೆಲ್ಲ ಸಂಶ್ಲೇಷಿಸಿ ಅಧ್ಯಯನಮಾಡಲಾಗಿದೆ. ಎಡಮುರಿ ಮೆಂತಾಲ್ ಮತ್ತು ಅದರ ಸ್ಟೀರಿಯೊ ಐಸೊಮರುಗಳನ್ನು ಟರ್ಪೀನ್ ವ್ಯುತ್ಪನ್ನಗಳಿಂದ ಪಡೆಯಬಹುದು. ಉದಾಹರಣೆಗೆ ಮೆಂತೋನ್, ಐಸೊಮೆಂತೋನ್ ಅಥವಾ ಪಿಪಿರಿಟೋನುಗಳನ್ನು ಅಪಕರ್ಷಿಸಿದರೆ ಇದು ಉಂಟಾಗುತ್ತದೆ. ಎಡಮುರಿ ಮೆಂತಲನ್ನು ಪ್ಯಾರಸೈಮೀನಿಗೆ ಪರಿವರ್ತಿಸಬಹುದು ಮತ್ತು ಮೆಂತೋನಿಗೆ ಉತ್ಕರ್ಷಿಸಬಹುದು. ಇದು ಸೌಮ್ಯ ಪೂತಿನಾಶಕ. ಚರ್ಮಕ್ಕೆ ಹಚ್ಚಿದರೆ ಆ ಜಾಗ ತಣ್ಣಗೆ ಜೋಮು ಹಿಡಿದಂತಾಗುತ್ತದೆ. ಆದ್ದರಿಂದ ಇದು ವೇದನಾಪಹಾರಿಯಾಗಿ ವರ್ತಿಸಬಲ್ಲದು. ಈ ಕಾರಣದಿಂದಲೆ ಇದನ್ನು ಇತರ ಚಂಚಲತೈಲಗಳಲ್ಲಿ ವಿಲೀನಿಸಿ ಹಚ್ಚಿದರೆ ನರದುರಿ (ನ್ಯೂರಲ್ಜಿಯ) ಮತ್ತು ಸಂಧಿವಾತಗಳು ಉಪಶಮನವಾಗುತ್ತವೆ. ಕರ್ಪೂರ ನೀಲಗಿರಿ ಎಣ್ಣೆ ಮತ್ತಿತರ ಅವಿಶೀಲ ಪೂತಿನಾಶಕಗಳೊಡನೆ ಮೆಂತಾಲನ್ನು ಕೂಡಿಸಿ. ನೆಗಡಿ ದನಿನಾಳದ ಉರಿತಗಳ (ಲ್ಯಾರಿಂಜೈಟಿಸ್) ಚಿಕಿತ್ಸೆಗೆ ಬಳಸುವ ಸೇದುಮದ್ದುಗಳನ್ನು (ಇನ್ ಹೆಲೆಂಟ್ಸ್) ತಯಾರಿಸುತ್ತಾರೆ.             		
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ